Tourism

Welcome to Basavakalyan, the historic city. As you move around, you could observe the cultural, social, linguistic diversities. Kannada, Marathi, Hindi with Urdu influence is spoken as general language for communication by mass. Majority of the population is Hindu, though you find Muslim colonies in deep city. City is full of temples as well as mosques. There are a lot of places to see in this small city – Anubhava Mantapa, Basavakalyan lake, Basaveshwara Vana, Sadguru Sadanand Swami Math, Jama Masjid, Basaveshwara Temple, Adat (huge grain market).

ಬಸವಕಲ್ಯಾಣ ನಗರ ಹಾಗೂ ಸ್ಥಳಿಯ ಪ್ರವಾಸಿ ತಾಣಗಳ ವಿವರ ಹಾಗೂ ಭಾವಚಿತ್ರಗಳು.
Parush Katte ಪರುಷ ಕಟ್ಟೆ:  ಬಿಜ್ಜಳನ ಪ್ರಧಾನ ಮಂತ್ರಿಯಾಗಿದ್ದ ಬಸವಣ್ಣನವರು ಈ ಸ್ಥಳದಲ್ಲಿ ಕುಳಿತು ಜನ ಸಾಮಾನ್ಯರ ಕುಂದು ಕೊರತೆಗಳನ್ನು, ಮಾನಸಿಕ ತುಮುಲಗಳನ್ನು ಬಗೆ ಹರಿಸುತ್ತಿದ್ದರೆಂದು ಪುರಾಣಗಳು ಹೇಳುತ್ತವೆ. ಅವರು ನೀಡುತ್ತಿದ್ದ ನ್ಯಾಯವನ್ನು ಭಕ್ತಾದಿಗಳು ಪರುಷದಂತೆ ಭಾವಿಸುತ್ತಿದ್ದರು. ಎಲ್ಲ ವಿಧದ ನ್ಯಾಯ ನೀಡುವ, ಎಲ್ಲರನ್ನು ಸಮಾಧಾನ ಪಡಿಸುವ ಈ ಸ್ಥಳಕ್ಕೆ ಪರುಷಕಟ್ಟೆ ಎಂಬ ಹೆಸರು ಬಂದಿದೆ.                                                                                                                                    
PGM ಪ್ರಭುದೇವರ ಗದ್ದುಗೆ: ಪ್ರಭುದೇವರ ಗದ್ದುಗೆ ಮಠವು ಬಸವ ಕಲ್ಯಾಣದಲ್ಲಿಯ ಪ್ರಮುಖ ಸ್ಥಳವಾಗಿದೆ. ಇದು ಅರುಹಿನ ಮನೆಯ ಸಮೀಪವಿದೆ. ಇದನ್ನು ಅಲ್ಲಮಪ್ರಭುವಿನ ಮಠವೆಂದು, ಶೂನ್ಯ ಸಿಂಹಾಸದ ಮೂಲಪೀಠವೆಂದು ಹೇಳಲಾಗುತ್ತದೆ. ಸುಂದರವಾದ ಕಟ್ಟಡವಾಗಿದೆ. ಈ ಪೀಠದ ಕರ್ತೃಗಳಾದ ಪ್ರಭುದೇವರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ತಂದೆ ನಿರಹಂಕಾರ ತಾಯಿ ಸುಜ್ಞಾನಿ ದೇವಿ ಉದರದಲ್ಲಿ ಜನಿಸಿದರು. ಮಾಯಾ ಕೋಲಾಹಲ ನಿರಂಜನ ಜಗದ್ಗುರು ಎಂಬ ಬಿರುದುಗಳಿಂದ ಶೋಭಿತರಾಗಿದ್ದರು. ಬಸವಣ್ಣನವರು ಅಂದು ಸ್ಥಾಪಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದರು. ಗೊಗ್ಗಯ್ಯ ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ ಮೊದಲಾದ ಶರಣರಿಗೆ ಉಪದೇಶ ನೀಡಿದ್ದರು.
ang

ಅಕ್ಕ ನಾಗಮ್ಮನ ಗವಿ: ಬಸವಕಲ್ಯಾಣನಿಂದ ೧ ಕಿ.ಮೀ. ಶಿವ ಶರಣೆ ಅಕ್ಕನಾಗಮ್ಮ ತಾಯಿಯವರು ಮಹಾತ್ಮ ಬಸವಣ್ಣನವರ ಸಹೋದರಿ. ಬಾಗೆವಾಡಿಯ ಮಾದರಸ, ಮಾದಲಾಂಬಿಕೆಯರ ಮಗಳು. ಬಸವಣ್ಣನವರಿಗೆ ಬೆನ್ನಾಸರೆಯಾಗಿ ನಿಂತವಳು. ಬಸವಣ್ಣನವರ ವಿದ್ಯಾರ್ಜನೆ ಹಾಗೂ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಬೆಂಗಾವಲಾಗಿ ನಿಂತಿದ್ದಳು.ಮೊದಲಿನಿಂದಲೂ ಯೋಗಸಾಧನೆಯ ಹಂಬಲ ತೀವ್ರತರ ವಾಗಿರುವದರಿಂದ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರ ಮಹಾಮನೆಯ ಹತ್ತಿರವಿರುವ ಗುಹೆಯಲ್ಲಿ ಯೋಗ ಸಾಧನೆಯ ಗೈಯುತ್ತಿದ್ದಳು. ಅದುವೇ ಅಕ್ಕ ನಾಗಮ್ಮನ ಗವಿ. ಅದರ ಪಕ್ಕದಲ್ಲಿ ಬಸವಣ್ಣನವರ ವಿಚಾರ ಪತ್ನಿಯಾದ ಪೃಥ್ವಿಗಗ್ಗಳ ಚಲುವೆಯಾದ ನೀಲಾಂಬಿಕಾ ತಾಯಿಯವರ ಗವಿಕೂಡ ಇದ್ದು ಈ ಎರಡು ಗವಿಗಳ ಮಧ್ಯದಲ್ಲಿ ಅಕ್ಕನಾಗಮ್ಮನ ಮೂರ್ತಿಯೂ ಸಹ ಇದೆ. ಈ ಸ್ಥಾನವು ಐತಿಹಾಸಿಕವಾದ ತ್ರೀಪುರಾಂತ ಕೆರೆಯ ದಡದಲ್ಲಿದೆ. ಇವೆರಡು ಗವಿಗಳ ಸಮೀಪದಲ್ಲಿ ಅರುಹಿನ ಮನೆ, ಹಡಪದ ಅಪ್ಪಣ್ಣನವರ ಗವಿ ಇದೆ.

bo ಬಂದವರ ಓಣಿಕಲ್ಯಾಣಕ್ಕೆ ಆಗಮಿಸುವ ಸಕಲ ಶರಣರಿಗೆ ಪ್ರಥಮ ಸ್ವಾಗತ ಕೋರುವ ಸ್ಥಾನವೇ ಬಂದವರ ಓಣಿ. ೧೨ನೇ ಶತಮಾನದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯು ಮಹಾತ್ಮಾ ಬಸವಣ್ಣನವರ ಮಹಿಮೆ ಕೇಳಿ ಉಡತಡಿಯಿಂದ ಕಲ್ಯಾಣಕ್ಕೆ ಬಂದಾಗ ಪ್ರಪ್ರಥಮವಾಗಿ ಈ ಸ್ಥಳದಲ್ಲಿ ಲಿಂಗಾರ್ಚನೆ ಕೈಕೊಂಡಿದ್ದರು. ಅಕ್ಕನು ಕಲ್ಯಾಣಕ್ಕೆ ಪ್ರವೇಶಿಸುವ ಮೊದಲೇ ನಿರಂಜನ ಜಗದ್ಗುರುಗಳಾದ ಅಲ್ಲಮ ಪ್ರಭುಗಳು ಅಕ್ಕಳ ಸತ್ವ ಪರೀಕ್ಷೆಗೆಂದು ಶಿವಶರಣ ಕಿನ್ನರಿ ಬೊಮ್ಮಯ್ಯನಿಗೆ ಕಳುಹಿಸಿದಾಗ ಬೊಮ್ಮಯ್ಯ ತಾಯಿಯ ವೈರಾಗ್ಯಕ್ಕೆ ಶರಣು ಹೋಗಿ “ಹುಲಿನೆಕ್ಕಿ ಬದುಕಿದೆ” ಎಂದು ಉದ್ಗಾರ ತೆಗೆಯುತ್ತಾರೆ. ಪುಣ್ಯ ಧರ್ಮಿಗಳು ನಡೆದಾಡಿದ ಈ ಸ್ಥಳವು ಜಾಗೃತ ಕೇಂದ್ರವಾಗಿದೆ. 
ld ಉಮಾಪೂರ (ಲಾಹೇಶ್ವರ) ದೇವಾಲಯ: ಎರಡು ಜೋಡು ದೇವಾಲಯಗಳ ಅದ್ಭುತ ಕಟ್ಟಡದ ಮಾದರಿ ಪ್ರವಾಸಿಗರಿಗೆ ಕಾಣಿಸುತ್ತದೆ. ಒಂದನೆ ಸೋಮೇಶ್ವರನ ಎರಡನೇ ಮಗನಾದ ೬ನೇ ವಿಕ್ರಮಾದಿತ್ಯನು. ೧೦೭೬ರಲ್ಲಿ ಪಟ್ಟಾಭಿಷಕ್ತನಾದ ಅವನ ಅವಧಿಯಲ್ಲಿ ಅತ್ಯುನ್ನತ ವಾಸ್ತು ಶಿಲ್ಪ ದೇವಾಲಯಗಳು ನಿರ್ಮಾಣಗೊಂಡವು. ಅವೇ ಉಮಾ ಮಹೇಶ್ವರ ದೇವಾಲಯಗಳು. ಮಹಾದೇವ ದೇವಾಲಯದ ಮುಖ ಪೂರ್ವ ದಿಕ್ಕಿನೆಡೆಗೆ ಇದೆ. ಮುಂಭಾಗದಲ್ಲಿ ದೀಪಸ್ಥಂಭವಿದ್ದು ದೇವಾಲಯದ ಗರ್ಭಗೃಹ ಚೌಕಾಕಾರದಲ್ಲಿದೆ. ದೇವಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಚಿಕ್ಕ ಚಿಕ್ಕ ರತ್ನ ಪಟ್ಟಿಕೆಗಳಿಂದ ಗರ್ಭಗೃಹದ ದ್ದಾರವನ್ನು ಅಲಂಕರಿಸಲಾಗಿದೆ. ದ್ವಾರ ಬಾಗಿಲದ ಅಕ್ಕ ಪಕ್ಕದಲ್ಲಿ ಆರುವರೆ ಅಡಿ ಎತ್ತರದ ಎರಡುವರೆ ಅಡಿ ಅಗಲದ ಶೈವ ದ್ವಾರಪಾಲಕರ ಭವ್ಯ ವಿಗ್ರಹಗಳು ಕಾಣಬಹುದು. ಮುಂದೆ ಮೂರು ಮುಖ ಮಂಟಪಗಳಿದ್ದು ತೆರೆದ ಬಾಗಿಲುಗಳಿವೆ. ಸುಂದರ ಕೆತ್ತನೆಯ ನಾಲ್ಕು ಕಂಬಗಳ ಮೇಲೆ ಸಭಾ ಮಂಟಪವಿದೆ. ಸಭಾಮಂಟಪದ ಮಧ್ಯದಲ್ಲಿ ಗರ್ಭಗೃಹಕ್ಕೆ ಮುಖಮಾಡಿ ಒಂದು ನಂದಿ ಮೂರ್ತಿಯುಂಟು. ಸಭಾಮಂಟಪದ ಸುತ್ತಲು ರಕ್ಷಾಸನವಿದ್ದು ಸುಂದರ ಕೆತ್ತನೆಯ ಅಲಂಕಾರಗಳು ಹೊಂದಿಸಲಾಗಿದೆ. ಇವು ವಿವಿಧ ಭಂಗಿಯಲ್ಲಿದ್ದು ನಗ್ನ ನರ್ತನ, ಢಮರುಗ ನರ್ತನೆ, ವೀಣಾವಾದನ, ಮೃದಂಗ ಇಂತಹ ಭಾವ ಭಂಗಿಗಳು ಮನ ಮೋಹಕವಾಗಿವೆ.
nam ನೂತನ ಅನುಭವ ಮಂಟಪ: ಭಾರತ ದೇಶದ ಇತಿಹಾಸದಲ್ಲಿಯೇ ೧೨ನೇ ಶತಮಾನವು ಧಾರ್ಮಿಕ, ಸಾಮಾಜಿಕ, ವೈಚಾರಿಕ ಕ್ರಾಂತಿಗಳ ಹೊಸ ವಿಚಾರಗಳ ಚಿಂತನ ಮಂಥನದಿಂದ ಬೆಳಗಿದ ಕ್ರಾಂತಿಯುಗವೆಂದು ಹೇಳಬಹುದು. ಈ ವಿಚಾರಗಳ ಬೆಳಕು ಬೆಳಗಿದ್ದುದು ಹಾಗೂ ಆಧ್ಯಾತ್ಮದಲ್ಲಿ ಸಾಧಿಸಿರುವ ಸಾಧಕರ ಪರೀಕ್ಷಾ ಕೇಂದ್ರವೇ ಅನುಭವ ಮಂಟಪ. ಅದರ ಪರಿಕಲ್ಪನೆಯಂತೆ ಒಂದು ಅನುಭವ ಮಂಟಪ ಕಟ್ಟಲು ೧೯೫೫ ಜನೆವರಿಯಲ್ಲಿ ಮೈಸೂರಿನ ಒಡೆಯ ಜಯ ಚಾಮರಾಜ ಒಡೆಯರು ಅಮೃತ ಹಸ್ತದಿಂದ ಅಡಿಗಲ್ಲು ಇಡಲಾಯಿತು. ಭಾಲ್ಕಿಯ ಲಿಂ.ಡಾ: ಚನ್ನಬಸವ ಪಟ್ಟದ್ದೇವರ ಮಹತ್ವಾಕಾಂಕ್ಷೆ ಪೂರ್ತಿಗೊಂಡಿತು. ಈ ಘನ ಕಾರ್ಯಕ್ಕೆ ಡಾ: ಬಿ.ಡಿ.ಜತ್ತಿ, ಶ್ರೀ ವಿಶ್ವನಾಥರೆಡ್ಡಿ ಮುದ್ನಾಳರಂತಹ ಅನೇಕ ಗಣ್ಯರು ಶ್ರಮಿಸಿದ್ದಾರೆ. ಚನ್ನಬಸವಣ್ಣನವರ ಸ್ಮರಣೋತ್ಸವ ನಿಮಿತ್ಯ ಪ್ರತಿವರ್ಷ ಈ ನೂತನ ಅನುಭವ ಮಂಟಪದ ಪರಿಸರದಲ್ಲಿ ೩ ದಿನಗಳ ಪರ್ಯಂತ ಶರಣರ ಸಮಾವೇಶವಾಗುವುದು. 
fort

ಬಸವ ಕಲ್ಯಾಣ ಕೋಟೆ: ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿದ್ದ ಸಂದರ್ಭದಲ್ಲಿ ಒಂದನೇ ಸೋಮೇಶ್ವರ ೧೦೪೮ರಲ್ಲಿ ಕಟ್ಟಿಸಿದ ಸುಂದರ ಕೋಟೆ ಇಲ್ಲಿದೆ. ಬಿಜ್ಜಳ ಪ್ರಧಾನಿಯಾಗಿ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರು ಪ್ರಧಾನ ಮಂತ್ರಿಯಾದ ಮೇಲೆ ಜಾಗತಿಕ ಇತಿಹಾಸದಲ್ಲಿ ಕಲ್ಯಾಣಕ್ಕೆ ಮಹತ್ವದ ಸ್ಥಾನ ಲಬಿsಸಿತು. ೧೩೨೧ರಲ್ಲಿ ಮಹಮದ್ ಬಿನ್ ತುಗಲಕನು ಕಲ್ಯಾಣದ ಕೋಟೆ ವಶಪಡಿಸಿಕೊಂಡಿದ್ದನೆಂದು ಅವನ ಒಂದು ಶಾಸನ ಸೂಚಿಸುತ್ತದೆ. ಮುಂದೆ ಬಹಮನಿ, ಬರೀದಿಶಾಹಿ, ಅದಿಲ್ ಶಾಹಿ, ಮೊಗಲರ, ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿ. ಶ. ೧೯೫೬ರಲ್ಲಿ ನವಾಬ ಜಮಾಲೋದ್ದಿನ್ ಮರಣದ ನಂತರ ಕೋಟೆ ಸರ್ಕಾರದ ವಶಕ್ಕೆ ಒಳಪಟ್ಟಿತ್ತು. ಸುಮಾರು ೧೦ ಎಕರೆ ಭೂ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಈ ಭವ್ಯ ಕೋಟೆಯಲ್ಲಿ ಹೈದರ ಮಹಲ್, ರಂಗೀನ ಮಹಲ್, ತಾಲಿಮ ಖಾನಾ, ರಾಜ ಮಹಲ್, ನೃತ್ಯ ಸಭಾಂಗಣ, ಬಾರೋದ ಖಾನಾ ಮೊದಲಾದ ಆಕರ್ಷಕ ಸ್ಮಾರಕಗಳಿವೆ. ಕೋಟೆಯಲ್ಲಿನ ಜನರಿಗೆ ಕುಡಿಯಲು ಜಲ ವ್ಯವಸ್ಥೆಗಾಗಿ ನಿರ್ಮಿಸಲಾದ ಕಾಲುವೆ ಇಂದಿಗೂ ಕಾಣಬಹುದಾಗಿದೆ.

toopi

ತೋಪುಗಳು: ನೌಗಜ ತೋಪು ೨೭ ಅಡಿ ಉದ್ದವಾಗಿದೆ. ಇದರ ಹಿಂಭಾಗವು ೬೯ ಮುಂಭಾಗವು ೫೯ ಅಂಗುಲ ಸುತ್ತಳತೆ ಹೊಂದಿದೆ. ಪ್ರತಿಯೊಂದು ಪಟ್ಟೆಗಳಿಗೆ ಮೇಲ್ಭಾಗದಲ್ಲಿ ಎರಡೆರಡು ಬಳೆಗಳಿದ್ದವು. ಈಗ ಒಂಬತ್ತು ಬಳೆಗಳು ಮಾತ್ರ ಉಳಿದಿವೆ. ಕಡಕ್ ಬಿಜಲಿ ತೋಪು ಕೋಟೆಯ ಎತ್ತರದ ಕಟ್ಟಡದ ಮೇಲಿದೆ. ೧೨ ಅಡಿ ಉದ್ದವಾಗಿರುವ ಈ ತೋಫು ತುಂಬ ನುಣುಪಾಗಿದೆ. ಇದರ ಹಿಂಭಾಗವು ೪೩, ಮುಂಭಾಗವು ೩೭ ಅಂಗುಲ ಸುತ್ತಳತೆಯಲ್ಲಿದೆ. ಪಂಚಧಾತುವಿನಿಂದ ನಿರ್ಮಿಸಿಲಾದ ಈ ತೋಪಿನ ಮೇಲೆ ಹೂ-ಬಳ್ಳಿಗಳನ್ನು ಚಿತ್ರಿಸಲಾಗಿದೆ. ಮುಂಭಾಗದಲ್ಲಿ ಪಕ್ಷಿಯ ದೇಹದಂತೆ ಗೋಚರಿಸುವ ಕೆಳಭಾಗದಲ್ಲಿ ಮೊಸಳೆಯ ಹಲ್ಲುಗಳಂತೆ ಇದ್ದು ಆನೆಯ ಎತ್ತರದ ಸೊಂಡಲಿನಂತೆ ಭಾಸವಾಗುತ್ತದೆ. ಇನ್ನು ಮೊದಲಾದ ತೋಫುಗಳಿವೆ. ಕೋಟೆಯ ಆವರಣದಲ್ಲಿ ಸಾವಿರಾರು ಕಲ್ಲು ಹಾಗೂ ಕಬ್ಬಿಣದ ಗುಂಡುಗಳಿವೆ.

nar1

ನಾರಾಯಣಪೂರ ಶಿಲ್ಪಕಲೆ: ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಅನೇಕ ದಿಗ್ವಿಜಯಗಳು ಸಾಧಿಸಿ ರಾಜ್ಯದಲ್ಲಿ ಸುಖಶಾಂತಿ ನೆಲೆಗೊಳಿಸಿದನು. ಧರ್ಮ ಸಹಿಷ್ಣತಾವಾದಿ ಆದ ಇವನು ಅನೇಕ ಅದ್ಭುತ ದೇವಾಲಯಗಳು ನಿರ್ಮಿಸಿದ ಅವುಗಳಲ್ಲಿ ನಾರಾಯಣಪೂರ ಶಿವದೇವಾಲಯ ಕೂಡ ಒಂದು. ಇದು ಬಸವಕಲ್ಯಾಣದಿಂದ ೬ ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ೮ ಕಂಬಗಳಿವೆ. ಬೃಹತ್ ಕಲ್ಲಿನ ಮಂಟಪ ಮೇಲೆ ನಿರ್ಮಾಣವಾಗಿದೆ. ಸುಂದರ ಶಿಲಾಬಾಲಿಕೆಯರ ಕೆತ್ತನೆಯ ವಿಗ್ರಹಗಳು ನೋಡುಗರ ಮನ ತಣಿಸುವದು ದ್ವಾರದ ಹತ್ತಿರ ಬಂದು ವಿಶಾಲವಾದ ಶಿಲಾ ಶಾಸಕ ಇಂದಿಗೂ ನೋಡಲು ಸಿಗಬಹುದು. ಬಸವಕಲ್ಯಾಣದಿಂದ ೨ ಕಿ.ಮೀ ದೂರದಲ್ಲಿ ಶಿವಪೂರ ಗ್ರಾಮವಿದೆ. ಈ ಗ್ರಾಮ ಚಿಕ್ಕದಾದರು ಶಾಂತಿ ಪ್ರಸ್ಥಾನಕ್ಕೆ ಹೆಸರು ವಾಸಿಯಾಗಿದೆ. ಇಲ್ಲಿಯಯಿದ್ದು ದಂಡೆಯ ಮೇಲೆ ಒಂದು ವಿಶಾಲ ಬಾವಿಯಿದ್ದು ಅದರ ಕಟ್ಟೆಯ ಮೇಲೆ ವಿಶಾಲ ದೇವಾಲಯವಿದೆ. ಇದು ಸಿದ್ದೇಶ್ವರ ದೇವಾಲಯವೆಂದು ಪ್ರಸಿದ್ಧಿ ಪಡೆದಿದೆ. ಇದರ ಸುತ್ತಲು ಪ್ರಶಾಂತ ವಾತಾವರಣ ವಿದ್ದು ಪ್ರೇಕ್ಷಣೆಯ ಸ್ಥಳವಾಗಿದೆ.

 

 

 

 

No. Of Visitors :
Last Updated   : 22/02/2012 Release History
Release 2.0.0, Powered By Karnataka Municipal Data Society & maintained by Basavakalyan CMC
This website can best viewed with the resolution 1024 * 768 using Internet Explorer 7.0 or above.
Valid CSS!